HOME > POEMS > KUVEMPU > BHAARATA TAPASWINI
Poet : Kuvempu (ಕುವೆಂಪು)
Poet : Kuvempu (ಕುವೆಂಪು)
Vedarushi bhoomiyali naakanarakagalindu Saavu badukina kattakadeya horaatadali Sandisive, maanavanedeya kaalakootadali Amritavana haaraisi baliraktadali mindu Kaadihevu kanneeru tumbi, naagarikateyu Naaginiya pragatinaamaka phaneya meletti Chumbisiye kollaleLesutide - hindina butthi Saveyutide, indina mahaa tapassina chiteya Raktama vibhootiyole mundina navodayada Dhavalima pinaakadharanaitahanu, mattomme Bhaaratambeyu jagada belakaaguvalu, hemme Gouravagalinda janaganada katu nirdayada Lobha buddhiya heena kutilateya sureneegi Merevalu tapaswiniye chakravartiniyaagi ! |
ವೇದಱುಶಿ ಭೂಮಿಯಲಿ ನಾಕನರಕಗಳಿಂದು ಸಾವು ಬದುಕಿನ ಕಟ್ಟಕಡೆಯ ಹೋರಾಟದಲಿ ಸಂದಿಸಿವೆ, ಮಾನವನೆಡೆಯ ಕಾಳಕೂಟದಲಿ ಅಮೃತವನ ಹಾರೈಸಿ ಬಲಿರಕ್ತದಲಿ ಮಿಂದು ಕಾಡಿಹೆವು ಕಣ್ಣೀರು ತುಂಬಿ, ನಾಗರಿಕತೆಯು ನಾಗಿಣಿಯ ಪ್ರಗತಿನಾಮಕ ಫಣೆಯ ಮೇಲೆತ್ತಿ ಚುಂಬಿಸಿಯೇ ಕೊಲ್ಲಲೆಳೆಸುತಿದೆ - ಹಿಂದಿನ ಬುತ್ತಿ ಸವೆಯುತಿದೆ, ಇಂದಿನ ಮಹಾ ತಪಸ್ಸಿನ ಚಿತೆಯ ರಕ್ತಮ ವಿಭೂತಿಯೊಳೆ ಮುಂದಿನ ನವೋದಯದ ಧವಳಿಮ ಪಿನಾಕಾದಾರನೈಥಹನು, ಮತ್ತೊಮ್ಮೆ ಭಾರತಾಂಬೆಯು ಜಗದ ಬೆಳಕಾಗುವಳು, ಹೆಮ್ಮೆ ಗೌರವಗಳಿಂದ ಜನಗಣದ ಕಟು ನಿರ್ದಯದ ಲೋಭ ಬುದ್ಧಿಯ ಹೀನ ಕುಟಿಳತೆಯ ಸುರೆನೀಗಿ ಮೆರೆವಳು ತಪಸ್ವಿನಿಯೆ ಚಕ್ರವರ್ತಿನಿಯಾಗಿ ! |