Search This Blog

Mettuva Nela Karnataka - ಮೆಟ್ಟುವ ನೆಲ ಕರ್ನಾಟಕ


HOME > POEMS > KUVEMPU > METTUVA NELA KARNATAKA

Poet : Kuvempu (ಕುವೆಂಪು)
Ellaadaru iru, enthaadaru iru
Endendigu nee kannadavaagiru

Kannada govina o muddina karu,
Kannadatanavondiddare neenammage kalpataru !

Nee mettuva nela - ade karnataka
Nee neruva maale - sahyaadri
Nee muttuva mara - shreegandhada mara
Nee kudiyuva neer - kaaveri

Pampananoduva ninnaa naalige
Kannadave satya,
Kumaravyasananaalipa kiviyadu
Kannadave nitya

Harihara raaghavarige eraguva mana,
Haalaagiha hampege koraguva mana,
Pempina banavaasige koraguva mana,
Kaa jaanake gini kogile impige,
Mallige sampage kedage sompige,
Maavina hongeya talirina tampige
Rasa romaanchanagoluvaatana mana
Elliddare aen ? entiddare aen ?
Endendigu taan

Kannadave satya !
Kannadave nitya !
Anyavenalade mithyaa !
ಎಲ್ಲಾದರೂ ಇರು, ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು !

ನೀ ಮೆಟ್ಟುವ ನೆಲ - ಅದೇ ಕರ್ನಾಟಕ
ನೀ ನೇರುವ ಮಾಲೆ - ಸಹ್ಯಾದ್ರಿ
ನೀ ಮುಟ್ಟುವ ಮರ - ಶ್ರೀಗಂಧದ ಮರ
ನೀ ಕುಡಿಯುವ ನೀರ್ - ಕಾವೇರಿ

ಪಂಪನನೋಡುವ ನಿನ್ನಾ ನಾಲಿಗೆ
ಕನ್ನಡವೇ ಸತ್ಯ,
ಕುಮಾರವ್ಯಾಸನನಾಲಿಪ ಕಿವಿಯದು
ಕನ್ನಡವೇ ನಿತ್ಯ

ಹರಿಹರ ರಾಘವರಿಗೆ ಎರಗುವ ಮನ,
ಹಾಳಾಗಿಹ ಹಂಪೆಗೆ ಕೊರಗುವ ಮನ,
ಪೆಂಪಿನ ಬನವಾಸಿಗೆ ಕೊರಗುವ ಮನ,
ಕಾ ಜಾನಕೆ ಗಿಣಿ ಕೋಗಿಲೆ ಇಂಪಿಗೆ,
ಮಲ್ಲಿಗೆ ಸಂಪಗೆ ಕೇದಗೆ ಸೊಂಪಿಗೆ,
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರಸ ರೋಮಾಂಚನಗೊಳುವಾತನ ಮನ
ಎಲ್ಲಿದ್ದರೆ ಏನ್ ? ಎಂತಿದ್ದರೆ ಏನ್ ?
ಎಂದೆಂದಿಗೂ ತಾನ್

ಕನ್ನಡವೇ ಸತ್ಯ !
ಕನ್ನಡವೇ ನಿತ್ಯ !
ಅನ್ಯವೆನಳದೆ ಮಿಥ್ಯಾ !