Search This Blog

Beesokallina pada - ಬೀಸೋಕಲ್ಲಿನ ಪದ


HOME > POEMS > JANAPADA > BEESOKALLINA PADA

Poet : Janapada (ಜನಪದ)
kallamma taayi mellamma raagiya
jalla jallaane uduramma! naa ninage
bellaadaarutiyaa beLagEnu ||

anduLLa aDigallu chanduLLa mEgallu
chandramatiyemba hiDigooTa | hiDukonDu
tande taayigaLa nenedEna ||

raagiyu mugidaavu raajaanna hechyaavu
naanhiDida kelasa vadagyaavu| raageekalle
naa toogi biDuteeni baladOLu ||

kallu biTTEnendu siTyaake sarasatiyE
kukkEli raagi beLeyaali | takkonDu
matte raatreege baruteeni ||

kallu koTTammage ellaa bhaagyavu barali
pallakki myaale maga barali | aa manege
mallige muDiyO sosi barali ||
ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯ
ಜಲ್ಲ ಜಲ್ಲಾನೆ ಉದುರಮ್ಮ! ನಾ ನಿನಗೆ
ಬೆಲ್ಲಾದಾರುತಿಯಾ ಬೆಳಗೇನು ||

ಅಂದುಳ್ಳ ಅಡಿಗಲ್ಲು ಚಂದುಳ್ಳ ಮೇಗಲ್ಲು
ಚಂದ್ರಮತೀಯೆಂಬ ಹಿಡಿಗೂಟ | ಹಿಡುಕೊಂಡು
ತಂದೆ ತಾಯಿಗಳ ನೆನೆದೇನ ||

ರಾಗಿಯೂ ಮುಗಿದಾವು ರಾಜಾನ್ನ ಹೆಚ್ಯಾವು
ನಾನ್ಹಿಡಿದ ಕೆಲಸ ವದಗ್ಯಾವು| ರಾಗೀಕಲ್ಲೆ
ನಾ ತೂಗಿ ಬಿಡುತೀನಿ ಬಲದೋಳು ||

ಕಲ್ಲು ಬಿಟ್ಟೆನೆಂದು ಸಿಟ್ಯಾಕೆ ಸರಸತಿಯೆ
ಕುಕ್ಕೇಲಿ ರಾಗಿ ಬೆಳೆಯಾಲಿ | ತಕ್ಕೊಂಡು
ಮತ್ತೆ ರಾತ್ರೀಗೆ ಬರುತೀನಿ ||

ಕಲ್ಲು ಕೊಟ್ಟಮ್ಮಗೆ ಎಲ್ಲಾ ಭಾಗ್ಯವು ಬರಲಿ
ಪಲ್ಲಕ್ಕಿ ಮ್ಯಾಲೆ ಮಗ ಬರಲಿ | ಆ ಮನೆಗೆ
ಮಲ್ಲಿಗೆ ಮುಡಿಯೋ ಸೊಸಿ ಬರಲಿ ||