Search This Blog

Sanjeya sobagu (ಸಂಜೆಯ ಸೊಬಗು)


HOME > POEMS > DR. PRADEEP KUMAR HEBRI > SANJEYA SOBAGU

Poet : Dr. Pradeep Kumar Hebri(ಡಾ. ಪ್ರದೀಪ್ ಕುಮಾರ್ ಹೆಬ್ರಿ)

sanjeya sobaganu kaaNuta nillalu
mahadaanandavu doreyuvu du |
paschima dikkali sooryanu muLugalu
lOkake kattalu muttuvudu ||

kaDalina teregaLu rabhasadali ELalu
gaaLiyu nammanu sOkuvudu |
baanali hakkiyu haarutaliralu
baaLina kashTavu tiLiyuvudu ||

gaaLiyu beesi maragiDa alugalu
uduritu elegaLu paTapaTane |
beesida gaaLige dhooLadu ELalu
muchchitu kaNNu aa oDane ||

manege hOguva hottadu aayitu
ammanu gaabarigondihaLu |
aaDalu hOda nammanu kaayuta
baagila baLiyE nintihaLu
ಸಂಜೆಯ ಸೊಬಗನು ಕಾಣುತ ನಿಲ್ಲಲು
ಮಹದಾನಂದವು ದೊರೆಯುವುದು |
ಪಶ್ಚಿಮ ದಿಕ್ಕಲಿ ಸೂರ್ಯನು ಮುಳುಗಲು
ಲೋಕಕೆ ಕತ್ತಲು ಮುತ್ತುವುದು ||

ಕಡಲಿನ ತೆರೆಗಳು ರಭಸದಲಿ ಏಳಲು
ಗಾಳಿಯು ನಮ್ಮನು ಸೋಕುವುದು |
ಬಾನಲಿ ಹಕ್ಕಿಯು ಹಾರುತಲಿರಲು
ಬಾಳಿನ ಕಷ್ಟವು ತಿಳಿಯುವುದು ||

ಗಾಳಿಯು ಬೀಸಿ ಮರಗಿಡ ಅಲುಗಲು
ಉದುರಿತು ಎಲೆಗಳು ಪಟಪಟನೆ |
ಬೀಸಿದ ಗಾಳಿಗೆ ಧೂಳದು ಏಳಲು
ಮುಚ್ಚಿತು ಕಣ್ಣು ಆ ಒಡನೆ ||

ಮನೆಗೆ ಹೋಗುವ ಹೊತ್ತದು ಆಯಿತು
ಅಮ್ಮನು ಗಾಬರಿಗೊಂಡಿಹಳು |
ಆಡಲು ಹೋದ ನಮ್ಮನು ಕಾಯುತ
ಬಾಗಿಲ ಬಳಿಯೇ ನಿಂತಿಹಳು