Search This Blog

Swaatantryada Hanate (ಸ್ವಾತಂತ್ರ್ಯದ ಹಣತೆ)


HOME > POEMS > K.S. NISSAR AHMED > SWAATANTRYADA HANATE

Poet : K S Nissar Ahmed (ಕೆ. ಎಸ್. ನಿಸ್ಸಾರ್ ಅಹಮದ್)

sadaa uriyutiruva haage swaatantryada haNate
duDime tailavereyutiralu biDuvillada janate
entu kundabahudu emma taaynaaDina ghanate?

muLLininda arive biDisidante bante mukti?
huliya baaya mEva kasiyuvante dheerashakti
paDeyitadanu janate, baaLa beseye naaDa bhakti.

swaatantryada jotege bandu koodalilla gaLike
vyakti vyakti bevara heeri maravaagide moLake;
mElErida haage bhadra paayavunTu gruhake

saagidante sallutiralu saadhaneyeDe gamana
praaNavanne pagaDeyaaDidavirigemma namana;
taayamuDige dinavu Erutirali hoovu davana.
ಸದಾ ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ
ದುಡಿಮೆ ತೈಲವೆರೆಯುತಿರಲು ಬಿಡುವಿಲ್ಲದ ಜನತೆ
ಎಂತು ಕುಂದಬಹುದು ಎಮ್ಮ ತಾಯ್ನಾಡಿನ ಘನತೆ?

ಮುಳ್ಳಿನಿಂದ ಅರಿವೆ ಬಿಡಿಸಿದಂತೆ ಬಂತೆ ಮುಕ್ತಿ?
ಹುಲಿಯ ಬಾಯ ಮೇವ ಕಸಿಯುವಂತೆ ಧೀರಶಕ್ತಿ
ಪಡೆಯಿತದನು ಜನತೆ, ಬಾಳ ಬೆಸೆಯೆ ನಾಡ ಭಕ್ತಿ.

ಸ್ವಾತಂತ್ರ್ಯದ ಜೊತೆಗೆ ಬಂದು ಕೂಡಲಿಲ್ಲ ಗಳಿಕೆ
ವ್ಯಕ್ತಿ ವ್ಯಕ್ತಿ ಬೆವರ ಹೀರಿ ಮರವಾಗಿದೆ ಮೊಳಕೆ;
ಮೇಲೇರಿದ ಹಾಗೆ ಭದ್ರ ಪಾಯವುಂಟು ಗೃಹಕೆ

ಸಾಗಿದಂತೆ ಸಲ್ಲುತಿರಲು ಸಾಧನೆಯೆಡೆ ಗಮನ
ಪ್ರಾಣವನ್ನೇ ಪಗಡೆಯಾಡಿದವಿರಿಗೆಮ್ಮ ನಮನ;
ತಾಯಮುಡಿಗೆ ದಿನವು ಏರುತಿರಲಿ ಹೂವು ದವನ.