Search This Blog

Aadarsha (ಆದರ್ಶ)


HOME > POEMS > SIDDAYYA PURANIKA > AADARSHA

Poet : Siddayya Puraanika (ಸಿದ್ದಯ್ಯ ಪುರಾಣಿಕ)

tukku hiDidu uLivudakkinta
tikki baLasi aLivudu mElayya;
huLu hatti koLevudakkinta
maNNa beretu moLevudu mElayya;
iTTu nusi muTTi naShisuvudakkinta
thoTTu uTTu harivudu mElayya;
unDu malagi bojju
beLesuvudakkinta
maaDi maaDi maDivudu mElayya;
Odi bhOdisi, vaadisuvudakkinta;
aritu, aacharisi, aadarshavaaguvudu
mElayya;
swatantradheera siddhEshwaraa,
maNiyaneNesi daNivudakkinta;
janara taNisi kuNivudu mElayya!
ತುಕ್ಕು ಹಿಡಿದು ಉಳಿವುದಕ್ಕಿಂತ
ತಿಕ್ಕಿ ಬಳಸಿ ಅಳಿವುದು ಮೇಲಯ್ಯ;
ಹುಳು ಹತ್ತಿ ಕೊಳೆವುದಕ್ಕಿಂತ
ಮಣ್ಣ ಬೆರೆತು ಮೊಳೆವುದು ಮೇಲಯ್ಯ;
ಇಟ್ಟು ನುಸಿ ಮುಟ್ಟಿ ನಶೀಸುವುದಕ್ಕಿಂತ
ತೊಟ್ಟು ಉಟ್ಟು ಹರಿವುದು ಮೇಲಯ್ಯ;
ಉಂಡು ಮಲಗಿ ಬೊಜ್ಜು
ಬೆಳೆಸುವುದಕ್ಕಿಂತ
ಮಾಡಿ ಮಾಡಿ ಮಡಿವುದು ಮೇಲಯ್ಯ;
ಓದಿ ಭೋದಿಸಿ, ವಾದಿಸುವುದಕ್ಕಿಂತ;
ಅರಿತು, ಆಚರಿಸಿ, ಆದರ್ಶವಾಗುವುದು
ಮೇಲಯ್ಯ;
ಸ್ವತಂತ್ರಧೀರ ಸಿದ್ಧೇಶ್ವರಾ,
ಮಣಿಯನೆಣೆಸಿ ದಣಿವುದಕ್ಕಿಂತ;
ಜನರ ತಣಿಸಿ ಕುಣಿವುದು ಮೇಲಯ್ಯ!