HOME > POEMS > KULAVARMA > DUDIMEYA GARIME
Poet : Kulavarma(ವಿ. ಬಿ. ಕುಳವರ್ಮ)
Poet : Kulavarma(ವಿ. ಬಿ. ಕುಳವರ್ಮ)
kabbiNa kuTTuta haareya maaDuta mudadinda koDuvenu raitanige | beLeyanu beLeyalu neravanu neeDuve janaranu salahuva daatanige || kaaDanu sEruta oNamara huDukuta nEgila aLatege koyyuvenu | uttama 'hala'vanu maaDuta nogavanu kettaneyondige neeDuvenu || baTTeya ganTanu oTTige sErisi katteya bennali irisuvenu | hariyuva neeranuu kalushitagoLisade ogeyuvanellara vasanavanu || kaDalali baleyanu beesuta meenanu saDagaradindali hiDiyuvenu | santege saagisi maaralu kuLitare sanjege haNavanu eNisuvenu || hosa hosa bageyali uDugeya holiyuta maiyanu manavanu beLagisuve | appana ammana makkaLa baLagada mechchuge gaLisalu tavakisuve || |
ಕಬ್ಬಿಣ ಕುಟ್ಟುತ ಹಾರೆಯ ಮಾಡುತ ಮುದದಿಂದ ಕೊಡುವೆನು ರೈತನಿಗೆ | ಬೆಳೆಯನು ಬೆಳೆಯಲು ನೆರವನು ನೀಡುವೆ ಜನರನು ಸಲಹುವ ದಾತನಿಗೆ || ಕಾಡನು ಸೇರುತ ಒಣಮರ ಹುಡುಕುತ ನೇಗಿಲ ಅಳತೆಗೆ ಕೊಯ್ಯುವೆನು | ಉತ್ತಮ 'ಹಾಲ'ವನು ಮಾಡುತ ನೊಗವನು ಕೆತ್ತನೆಯೊಂದಿಗೆ ನೀಡುವೆನು || ಬಟ್ಟೆಯ ಗಂಟನು ಒಟ್ಟಿಗೆ ಸೇರಿಸಿ ಕತ್ತೆಯ ಬೆನ್ನಲಿ ಇರಿಸುವೆನು | ಹರಿಯುವ ನೀರನು ಕಲುಷಿತಗೊಳಿಸದೆ ಒಗೆಯುವನೆಲ್ಲರ ವಸನವನು || ಕಡಲಲಿ ಬಲೆಯನು ಬೀಸುತ ಮೀನನು ಸಡಗರದಿಂದಲಿ ಹಿಡಿಯುವೆನು | ಸಂತೆಗೆ ಸಾಗಿಸಿ ಮಾರಲು ಕುಳಿತರೆ ಸಂಜೆಗೆ ಹಣವನು ಎನಿಸುವೆನು || ಹೊಸ ಹೊಸ ಬಗೆಯಲಿ ಉಡುಗೆಯ ಹೊಲಿಯುತ ಮೈಯನು ಮನವನು ಬೆಳಗಿಸುವೆ | ಅಪ್ಪನ ಅಮ್ಮನ ಮಕ್ಕಳ ಬಳಗದ ಮೆಚ್ಚುಗೆ ಗಳಿಸಲು ತವಕಿಸುವೆ || |