Search This Blog

Jai Bhuvaneshwari (ಜೈ ಭುವನೇಶ್ವರಿ)


HOME > POEMS > B. V. SATYANARAYANARAO > JAI BHUVANESHWARI

Poet : B. V. Satyanarayanarao (ಬಿ. ವಿ. ಸತ್ಯನಾರಾಯಣರಾವ್)

bhuvanEshwari pada poojisi hELuva sirigannaDa vara chariteyanu |
kannaDa naaDina hemmeya makkaLa kELiri naaDina sobagannu ||

geddu pallavara kadambamayoora meredanu varabanavaasiyali |
tadanantara chaalukyara aaLvike veerataaNa baadaamiyali ||

naaDina hemmeyu ganga manetana raashtrakooTa hoysaLa hirime |
vijayanagarasiri keLadiya vaibhava kannaDamaateya nijagarime ||

hoysaLa patanada nantara beLeyitu vijayanagaravati sheeghradali |
lOkave beregaaguva sirisampada mareyitu ee saamraajyadali ||

yuddhadi aanglaranedurisi geddaLu channammanu kittoorinali |
drOhake sereyaaguta dinavanu dooDidaLavalu jailinali ||

raajara anthakalahadi biLiyaru bhaaratavannE nungidaru |
maisoorina huli Teepuva sOlisi rangapaTTaNavanmaridaru ||

swatantra bhaarata chaLuvaLi dEshadi beLeyitu gaandhee tatwadali |
swadEshi chaLuvaLi asahakaaragaLu moLetavu hiriyara maargalali ||

nalavattELara aagasTinali hadinaalkara naDuraatriyali |
\haaritu swatantra bhaaratabaavuTa hemmeya bhaarata dEshadali ||

aivattaarara navembarondu - vishaala maisoorina udaya |
bhaavane tumbalu eppatmoorarali karnaaTakavaagiha pariya ||

hindoo muslim kraista jaina basavEshwara siripanthavide |
konkaNi urdu tuLuvina samskRuti kannaDatanajala chimmutide ||

"kannaDagellali kannaDabaaLali" nammee kannaDa neladalli |
"kannaDa kaliyiri kannaDa ghOshisi" nammaya kannaDanaaDinali||
ಭುವನೇಶ್ವರಿ ಪದ ಪೂಜಿಸಿ ಹೇಳುವ ಸಿರಿಗನ್ನಡ ವರ ಚರಿತೆಯನು |
ಕನ್ನಡ ನಾಡಿನ ಹೆಮ್ಮೆಯ ಮಕ್ಕಳ ಕೇಳಿರಿ ನಾಡಿನ ಸೊಬಗನ್ನು ||

ಗೆದ್ದು ಪಲ್ಲವರ ಕದಂಬಮಯೂರ ಮೆರೆದನು ವರಬನವಾಸಿಯಲಿ |
ತದನಂತರ ಚಾಲುಕ್ಯರ ಆಳ್ವಿಕೆ ವೀರತಾಣ ಬಾದಾಮಿಯಲಿ ||

ನಾಡಿನ ಹೆಮ್ಮೆಯು ಗಂಗಾ ಮನೆತನ ರಾಷ್ಟ್ರಕೂಟ ಹೊಯ್ಸಳ ಹಿರಿಮೆ |
ವಿಜಯನಗರಸಿರಿ ಕೆಳದಿಯ ವೈಭವ ಕನ್ನಡಮಾತೆಯ ನಿಜಗರಿಮೆ ||

ಹೊಯ್ಸಳ ಪತನದ ನಂತರ ಬೆಳೆಯಿತು ವಿಜಯನಗರವತಿ ಶೀಘ್ರದಲಿ |
ಲೋಕವೇ ಬೆರಗಾಗುವ ಸಿರಿಸಂಪದ ಮರೆಯಿತು ಈ ಸಾಮ್ರಾಜ್ಯಾದಲಿ ||

ಯುದ್ಧದಿ ಆಂಗ್ಲರನೆದುರಿಸಿ ಗೆದ್ದಲು ಚನ್ನಮ್ಮನು ಕಿತ್ತೂರಿನಲಿ |
ದ್ರೋಹಕೆ ಸೆರೆಯಾಗುತ ದಿನವನು ದೂಡಿಡಾಳವಳು ಜೈಲಿನಲಿ ||

ರಾಜರ ಅಂತಕಾಲಹದಿ ಬಿಳಿಯರು ಭಾರತವನ್ನೇ ನುಂಗಿದರು |
ಮೈಸೂರಿನ ಹುಲಿ ಟೀಪುವ ಸೋಲಿಸಿ ರಂಗಪಟ್ಟಣವನಮರಿದರು ||

ಸ್ವತಂತ್ರ ಭಾರತ ಚಳುವಳಿ ದೇಶದಿ ಬೆಳೆಯಿತು ಗಾಂಧೀ ತತ್ವದಲಿ |
ಸ್ವದೇಶಿ ಚಳುವಳಿ ಅಸಹಕಾರಗಳು ಮೊಳೆತವು ಹಿರಿಯರ ಮಾರ್ಗದಲಿ ||

ನಲವತ್ತೇಳರ ಆಗಸ್ತಿನಲಿ ಹದಿನಾಲ್ಕರ ನಡುರಾತ್ರಿಯಲಿ |
ಹಾರಿತು ಸ್ವತಂತ್ರ ಭಾರತಬಾವುಟ ಹೆಮ್ಮೆಯ ಭಾರತ ದೇಶದಲಿ ||

ಐವತ್ತಾರರ ನಾವೆಂಬರೊಂದು - ವಿಶಾಲ ಮೈಸೂರಿನ ಉದಯ |
ಭಾವನೆ ತುಂಬಲು ಎಪ್ಪತ್ಮೂರರಲಿ ಕರ್ನಾಟಕವಾಗಿಹ ಪರಿಯ ||

ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಬಸವೇಶ್ವರ ಸಿರಿಪಂಥವಿದೆ |
ಕೊಂಕಣಿ ಉರ್ದು ತುಳುವಿನ ಸಂಸ್ಕೃತಿ ಕನ್ನಡತನಜಲ ಚಿಮ್ಮುತಿದೆ ||

"ಕನ್ನಡಗೆಲ್ಲಲಿ ಕನ್ನಡಬಾಳಲಿ" ನಮ್ಮೀ ಕನ್ನಡ ನೆಲದಲ್ಲಿ |
"ಕನ್ನಡ ಕಲಿಯಿರಿ ಕನ್ನಡ ಘೋಶಿಸಿ" ನಮ್ಮಯ ಕನ್ನಡನಾಡಿನಲಿ||