Search This Blog

Kaamana Billu (ಕಾಮನ ಬಿಲ್ಲು)


HOME > POEMS > NINGANNA KUNTI > KAAMANA BILLU

Poet : Ninganna Kunti(ನಿಂಗಣ್ಣ ಕುಂಟಿ)

raviyado horaTanu paDuvaNake
taayiya maneyanu sEralike
sanjeya hottina hoobisilu
kaNNina higgina andada honalu
biLitere mODada anchinali
hanimaLe beeLuva hottinali
tunturu haniGaLu beeLutive
kaamana billanu mooDisive
kaamana billanu nODalli
maNidiha billadu mugilalli
kittaLe kEsari haLadi kempu
neeli kandu nEriLe tampu
nelakoo mugiligoo muTTihudu
kaNNige habbava tandihudu
sooryanu muLugida kattalu banditu
mODavu chaduritu maLeyoo nintitu
mareyali ODitu kaamana billu
kaaNadaayitu maayada billu
ರವಿಯದೊ ಹೊರಟನು ಪಡುವಣಕೆ
ತಾಯಿಯ ಮನೆಯನು ಸೇರಲಿಕೆ
ಸಂಜೆಯ ಹೊತ್ತಿನ ಹೂಬಿಸಿಲು
ಕಣ್ಣಿನ ಹಿಗ್ಗಿನ ಅಂದದ ಹೊನಲು
ಬಿಳಿತೆರೆ ಮೋಡದ ಅಂಚಿನಲಿ
ಹನಿಮಳೆ ಬೀಳುವ ಹೊತ್ತಿನಲಿ
ತುಂತುರು ಹನಿಗಳು ಬೀಳುತಿವೆ
ಕಾಮನ ಬಿಲ್ಲನು ಮೂಡಿಸಿವೆ
ಕಾಮನ ಬಿಲ್ಲನು ನೋಡಲ್ಲಿ
ಮಣಿದಿಹ ಬಿಲ್ಲದು ಮುಗಿಲಲ್ಲಿ
ಕಿತ್ತಳೆ ಕೇಸರಿ ಹಳದಿ ಕೆಂಪು
ನೀಲಿ ಕಂದು ನೇರಿಳೆ ತಂಪು
ನೆಲಕೂ ಮುಗಿಲಿಗೂ ಮುಟ್ಟಿಹುದು
ಕಣ್ಣಿಗೆ ಹಬ್ಬವ ತಂದಿಹುದು
ಸೂರ್ಯನು ಮುಳುಗಿದ ಕತ್ತಲು ಬಂದಿತು
ಮೋಡವೂ ಚದುರಿತು ಮಳೆಯೂ ನಿಂತಿತು
ಮರೆಯಲಿ ಓಡಿತು ಕಾಮನ ಬಿಲ್ಲು
ಕಾಣದಾಯಿತು ಮಾಯದ ಬಿಲ್ಲು