Search This Blog

Hacchevu kannadada deepa (ಹಚ್ಚೇವು ಕನ್ನಡದ ದೀಪ)


HOME > POEMS > D.S. KARKI > HACCHEVU KANNADA DEEPA

Poet : D S Karki (ಡಿ. ಎಸ್. ಕರ್ಕಿ)

Hacchevu kannadada deepa
Hacchevu kannadada deepa
Karunaada deepa sirinudiya deepa
Olavetti toruvaa deepa || Hacchevu kannadada deepa ||

Bahudinagalinda maimaraveyinda
Koodiruva koleya kocchevu
Ellelli kannadada kampu soora
Lallalli karana chaachevu

Maretevu marava, teredevu manava, eredevu olava hindina nenapa
Naranaravanella hurigolisi hosedu hacchevu kannadada deepa ||1||

Kalpaneya kannu harivanaka saalu
Deepagala belaka beerevu
Hacchiruva deepadali taaya roopa
Acchaliyadante torevu
Odalodala kecchinaa kidigalannu
Gadinaadinaache torevu

Hommiralu preeti elliyadu bheeti? Naadolave neeti hidi nenapa
Manemanegalalli manamanagalalli Hacchevu kannadada deepa ||2||

Teretereda kanninali naehaveredu
Navajyotiyanne mudisevu
Nammannavundu anyaayagaiyu
Vanthavara hucchu bidisevuIhudemage chalavu, kannadada balavu kannadada olavu hidinenapa ||3||

Nammavaru galisidaa hesar ulisa
Lellaaru ondu goodevu
Nammedeya midiyuvee maatinalli
Maateyanu pooje maadevu
Nammusiru teeduvee naadinalli
Maangalyageeta haadevu

Toredevu marula, kadedevu irula padedevu tirula hidinenepaa
Karulemba kudige minchanne mudisi Hacchevu kannadada deepa ||4||

ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪ || ಹಚ್ಚೇವು ಕನ್ನಡದ ದೀಪ ||

ಬಹುದಿನಗಳಿಂದ ಮೈಮರವೆಯಿಂದ
ಕೂಡಿರುವ ಕೊಳೆಯಾ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂರ
ಲಲ್ಲಲ್ಲಿ ಕಾರಣ ಚಾಚೆವು
ಮರೆತೇವು ಮರವ, ತೆರೆದೇವು ಮನವ, ಎರೆದೇವು ಒಲವ ಹಿಂದಿನ ನೆನಪ
ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ ||1||

ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೆವು
ಹಚ್ಚಿರುವ ದೀಪದಲಿ ತಾಯ ರೂಪ
ಅಚ್ಚಳಿಯದಂತೆ ತೋರೇವು
ಓಡಲೊಡಲ ಕೆಚ್ಚೀನಾ ಕಿಡಿಗಳನ್ನು
ಗಡಿನಾಡಿನಾಚೆ ತೂರೆವು

ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ? ನಾಡೊಲವೆ ನೀತಿ ಹಿಡಿ ನೆನಪ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ ||2||

ತೆರೆತೆರೆದ ಕಣ್ಣಿನಲಿ ನೇಹವೆರೆದು
ನವಜ್ಯೋತಿಯನ್ನೇ ಮೂಡಿಸೆವು
ನಮ್ಮಣ್ನವುಂಡು ಅನ್ಯಾಯಗೈಯು
ವಂತವರ ಹುಚ್ಚು ಬಿಡಿಸೇವು ಇಹುದೆಮಗೆ ಛಲವು, ಕನ್ನಡದ ಬಲವೂ ಕನ್ನಡದ ಒಲವು ಹಿದಿನೆನಪ ||3||

ನಮ್ಮವರು ಗಳಿಸಿದಾ ಹೆಸರುಳಿಸಲ್
ಲೆಲ್ಲಾರು ಒಂದು ಗೂಡೆವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆ ಮಾಡೆವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು

ತೊರೆದೇವು ಮರುಳ, ಕಡೆದೇವು ಇರುಳ ಪಡೆದೇವು ತಿರುಳ ಹಿಡಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೇ ಮುಡಿಸಿ ಹಚ್ಚೇವು ಕನ್ನಡದ ದೀಪ ||4||