HOME > POEMS > K.S. NISSAR AHMED > NITHYOTSAVA
Poet : K S Nissar Ahmed
Poet : K S Nissar Ahmed
Jogada siri belakinalli, tungeya tene balukinalli Sahyaadriya lohadinda uttungada nilukinalli Nityaharidwarnavanada tege gandha tarugalalli Nithyotsava, taayi nithyotsava Ninage nithyotsava taayi nithyotsava Itihaasada himadallina simhaasana maaleyalli Gatasaahasa saarutiruva shaasanagala saalinalli, Olegariya sirigalalli, degulagala bhittigalalli Nithyotsava, taayi nithyotsava Halavennada hirimeye, kulavennada garimeye Sadwikaasasheela nudiya lokaavrita seemeye Ee vatsara nirmatsara manadudaara mahimeye Nithyotsava, taayi nithyotsava |
ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದಿಂದ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣವನದ ತೆಗೆ ಗಂಧ ತರುಗಳಲ್ಲಿ ನಿತ್ಯೋತ್ಸವ, ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ, ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲ್ಲಿ ನಿತ್ಯೋತ್ಸವ, ತಾಯಿ ನಿತ್ಯೋತ್ಸವ ಹಲವೆನ್ನಡ ಹಿರಿಮೆಯೇ, ಕುಲವೆನ್ನದ ಗರಿಮೆಯೇ ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೇ ಈ ವತ್ಸರ ನಿರ್ಮಾತ್ಸರ ಮಣದುದಾರ ಮಹಿಮೆಯೇ ನಿತ್ಯೋತ್ಸವ, ತಾಯಿ ನಿತ್ಯೋತ್ಸವ |