Search This Blog

Kannada Naada Raani (ಕನ್ನಡ ನಾಡ ರಾಣಿ)


HOME > POEMS > D.R. Bendre > KANNADA NAADA RAANI

Poet : D R Bendre (ದ. ರಾ. ಬೇಂದ್ರೆ)
Elu shoorara khanee elu shoorara raani
Elu teerada veera rasada vaani
Elu meerida jaani elu ee sthithi gaani
Elu vara varada paani

Shoora purushara koneya veera kavigala goneyu
Bheerutanavemba shalyakke moneyu
Dheera satiyara teneyu veerarasagala soneyu
Ee reeti ninna maneyu

Bharade beleyuva beleyu twarade hariyuva holeyu
Irade pratikaalakke baruva maleyu
Varalakshanada kaleyu, surara seemeya beleyu
Iruvantha ninna ileyu

Sattiruvudedeseru suttiruva visha heeru
Battiruvudamrita jhari matte toru
Suttulla nooraaru bhittugala neenooru
Kittu bhaya bitta beru

Andinantaha dhaanavu andinantaha tenavu
Andinantavara hiridaada manavu
Ande andina tanavu chandadaatike anuvu
Endu tandeetu dinavu

Neenu nelesida kaadu maanisuvataa - naadu
Dhyaanisuvarai ninna haadi haadu
Ee naadinolu maadu praanaputrara beedu
Enu nandanada paadu |
ಏಳು ಶೂರರ ಖನೀ ಏಳು ಶೂರರ ರಾಣಿ
ಏಳು ತೀರದ ವೀರ ರಸದ ವಾಣಿ
ಏಳು ಮೀರಿದ ಜಾನಿ ಏಳು ಈ ಸ್ಥಿಥಿ ಗಾಣಿ
ಏಳು ವರ ವಾರದ ಪಾಣಿ

ಶೂರ ಪುರುಷರ ಕೊನೆಯ ವೀರ ಕವಿಗಳ ಗೊನೆಯು
ಭೀರುತನವೆಂಬ ಶಲ್ಯಕ್ಕೆ ಮೊನೆಯು
ಧೀರ ಸತಿಯರ ತೆನೆಯು ವೀರರಸಗಳ ಸೊನೆಯು
ಈ ರೀತಿ ನಿನ್ನ ಮನೆಯು

ಭರದೆ ಬೆಳೆಯುವ ಬೆಳೆಯು ತ್ವರದೆ ಹರಿಯುವ ಹೊಳೆಯು
ಇರದೆ ಪ್ರತಿಕಾಲಕ್ಕೆ ಬರುವ ಮಳೆಯು
ವರಲಕ್ಷಣದ ಕಲೆಯು, ಸುರರ ಸೀಮೆಯ ಬೆಳೆಯು
ಇರುವಂಥ ನಿನ್ನ ಇಳೆಯು

ಶತ್ತಿರುವುದೆದೆಸೆರು ಸುತ್ತಿರುವ ವಿಷ ಹೀರು
ಬತ್ತಿರುವುದಮೃತ ಝರಿ ಮತ್ತೆ ತೋರು
ಸುತ್ತುಳ್ಳ ನೂರಾರು ಭಿತ್ಟುಗಳ ನೀನೂರು
ಕಿತ್ತು ಭಯ ಬಿಟ್ಟ ಬೇರು

ಅಂದಿನಂತಹ ಧಾನವು ಅಂದಿನಂತಹ ತೆನವು
ಅಂದಿನಂತವರ ಹಿರಿದಾದ ಮನವು
ಅಂದೆ ಅಂದಿನ ತಾಣವು ಚಂದಾದಾಟಿಕೆ ಅನುವು
ಎಂದು ತಂದೀತು ದಿನವು

ನೀನು ನೆಲೆಸಿದ ಕಾಡು ಮಾನಿಸುವಾತಾ - ನಾಡು
ಧ್ಯಾನಿಸುವರೈ ನಿನ್ನ ಹಾಡಿ ಹಾಡುಕ್ಯೂ
ಈ ನಾಡಿನೊಳು ಮಾಡು ಪ್ರಾಣಪುತ್ರರ ಬೀಡು
ಏನು ನಂದನದ ಪಾಡು |