Search This Blog

Naveena - ನವೀನ


HOME > POEMS > KUVEMPU > NAVEENA

Poet : Kuvempu (ಕುವೆಂಪು)

Naadina punyada poorva digantadi
Nava arunodaya hommutide !
Chiranootana chetanadutsaahadi
Naveena jeevana chimmutide !

Abhinava madhukokila kalakanthadi
Swarasura chaapagalunnutive !
Shyaamala kaanana suma sammeladi
Inchara saasira ponmutive!

Kivi kannagutide !
Kane kiviyaagutide !
Bhoomvyomada neelanganadali
Kendaremugilina rangoli
Ranjisutide hole tereduchchittida
Kempage nunmaLalanu holi !
Himamani sinchita thrunavistaaradi
Nesaru kidibalaneyyutide

Vihanga dampati tarushaakhaagradi
Premaalaapanegaiyutide
Naveenagaanava keli,
Naadina punyada poorvadigantadi
Naveena jeevana chimmutide !
ನಾಡಿನ ಪುಣ್ಯದ ಪೂರ್ವ ದಿಗಂತದಿ
ನವ ಅರುಣೋದಯ ಹೊಮ್ಮುತಿದೆ !
ಚಿರನೂತನ ಚೇತನಾಡುತ್ಸಾಹದಿ
ನವೀನ ಜೀವನ ಚಿಮ್ಮುತಿದೆ !

ಅಭಿನವ ಮಧುಕೋಕಿಲ ಕಲಾಕಂಠದಿ
ಸ್ವರಸುರ ಚಾಪಗಳುಣ್ಮುತಿವೆ !
ಶ್ಯಾಮಲ ಕಾನನ ಸುಮ ಸಮ್ಮೇಳದಿ
ಇಂಚರ ಸಾಸಿರ ಪೊಣ್ಮುತಿವೆ!

ಕಿವಿ ಕಣ್ಣಾಗುತಿದೆ !
ಕಾಣೆ ಕಿವಿಯಾಗುತಿದೆ !
ಭೂಮವ್ಯೋಮದ ನೀಲಾಂಗಣದಲಿ
ಕೆಂದರೆಮುಗಿಲಿನ ರಂಗೋಲಿ
ರಂಜಿಸುತಿದೆ ಹೊಳೆ ತೆರೆದುಚ್ಚಿತ್ತಿದ
ಕೆಂಪಗೆ ನುನ್ಮಳಲನು ಹೋಳಿ !
ಹಿಮಾಮಣಿ ಸಿಂಚಿತ ತೃಣವಿಸ್ತಾರಡಿ
ನೇಸರು ಕೀಡಿಬಳನೆಯ್ಯುತಿದೆ

ವಿಹಂಗ ದಂಪತಿ ತರುಶಾಖಾಗ್ರದಿ
ಪ್ರೇಮಾಲಾಪಾನೆಗೈಯುತಿದೆ
ನವೀನಗಾನವ ಕೇಳಿ,
ನಾಡಿನ ಪುಣ್ಯದ ಪೂರ್ವದಿಗಂತದಿ
ನವೀನ ಜೀವನ ಚಿಮ್ಮುತಿದೆ !